ಅನ್ನಭಾಗ್ಯ ಯೋಜನೆ: DBT ಸ್ಥಿತಿಯನ್ನು ಪರಿಶೀಲಿಸಿ | Anna Bhagya DBT Status Check Online 2024

ಎಲ್ಲರಿಗು ನಮಸ್ಖರ. ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೇ? ಎಷ್ಟು ಹಣ ವರ್ಗಾವಣೆಯಾಗಿದೆ? ಈ ಲೇಖನವು ಅನ್ನ ಭಾಗ್ಯದ DBT ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು ಎಂಬುದನ್ನು ವಿವರಿಸುತ್ತದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ದರು. ಅದರಂತೆ ಅನ್ನ ಭಾಗ್ಯ ಯೋಜನೆ ಜಾರಿಗೆ ತಂದಿದ್ದು, 5 ಕೆಜಿ ಬದಲಿಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ಕೆಜಿಗೆ 34 ರೂ. ಪ್ರತಿ ಸದಸ್ಯರಿಗೆ 170 ರೂ.

ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗೆ ಅನ್ನ ಭಾಗ್ಯ ಡಿಬಿಟಿ ಮೂಲಕ ಜಮಾ ಮಾಡಲಾಗುವುದು. ಅದರಂತೆ, ಕರ್ನಾಟಕ ಸರ್ಕಾರವು ಪ್ರತಿ ತಿಂಗಳು ಆಯಾ ಪ್ರಯೋಜನಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸುತ್ತದೆ. ನಿಮ್ಮ ಬ್ಯಾಂಕ್ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ಪರಿಶೀಲಿಸಿ.

Ration Card Amount in Karnataka

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಅನ್ನಭಾಗ್ಯ ಯೋಜನೆಯಡಿ ಪ್ರತಿ ಮನೆಗೆ 10 ಕೆಜಿ ಅಕ್ಕಿ ವಿತರಿಸುವುದಾಗಿ ಭರವಸೆ ನೀಡಿತ್ತು. ಆದರೆ, ಅಗತ್ಯ ಪ್ರಮಾಣದ ಅಕ್ಕಿ ಲಭ್ಯವಾಗದ ಕಾರಣ, ಅನ್ನಭಾಗ್ಯ ಯೋಜನೆಗೆ ಸೇರಿಸಲಾಗಿದ್ದು, 5 ಕೆಜಿ ಅಕ್ಕಿಗೆ ಹಣ ನೀಡಲಾಗಿದೆ. ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರತಿ ಕುಟುಂಬದ ಸದಸ್ಯರಿಗೆ 170 ರೂ. ಠೇವಣಿ ನೇರ ನಗದು ವರ್ಗಾವಣೆ (DBT) ಮೂಲಕ ಮಾಡಲಾಗುತ್ತದೆ.

Anna Bhagya DBT Status Check 2024

ನಿಮ್ಮ ಬ್ಯಾಂಕ್ ಖಾತೆಗೆ ಅನ್ನಭಾಗ್ಯ ಯೋಜನೆ ಹಣ ಬಂದಿದೆಯೇ ಮತ್ತು ಎಷ್ಟು ಹಣ ಜಮಾ ಆಗುತ್ತದೆ ಎಂಬುದನ್ನು ತಿಳಿಯಲು ಈ ಪ್ರಶ್ನೆಯಲ್ಲಿ ತಿಳಿಸಿರುವ ವಿಧಾನವನ್ನು ಅನುಸರಿಸಬಹುದು.

  • Step-1: ಮೊದಲನೇಯದಾಗಿ ಕೇಳಗೆ ನೀಡಿರುವ ಕರ್ನಾಟಕ ಆಹಾರ ಇಲಾಖೆಯ ವೆಬ್‌ಸೈಟ್‌ (ahara.kar.nic.in/lpg) ಲಿಂಕ್ ಮೇಲೆ ಕ್ಲಿಕ್‌ ಮಾಡಿ.
  • Step-2: ಅಲ್ಲಿ ವಿಭಾಗವಾರು ಮೂರು ಲಿಂಕ್‌ಗಳಿರುವ‌ ಪೆಜ್‌ ಒಪನ್‌ ಆಗುತ್ತದೆ. ನಿಮ್ಮ ಜಿಲ್ಲೆಯ ಹೆಸರು ಇರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ. ಉದಾ. ONLY FOR BENGALURU DISTRICTS CLICK HERE ಎಂದಿರುತ್ತದೆ.

Anna Bhagya DBT Status Check Online 2024 Step-1

  • Step-3: ಮುಂದಿನ ಪೇಜ್‌ನಲ್ಲಿ ಕೊನೆಯ ಆಯ್ಕೆ ನೇರ ನಗದು ವರ್ಗಾವಣೆಯ ಸ್ಥಿತಿ (Status Of DBT) ಎಂಬ Option ಕಾಣುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ.

 

Anna Bhagya DBT Status Check Online 2024 Step-2
  • Step-4: Status of DBT ಪುಟ ಓಪನ್‌ ಆಗುತ್ತದೆ ಅದರಲ್ಲಿ Select Year, Select Month ಅಂತ ಇರುತ್ತದೆ. ನೀವು ಯಾವ ತಿಂಗಳ Anna Bhagya DBT Status Check ಮಾಡಬೇಕೆಂದುಕೊಂಡಿದ್ದೀರಿ ಆ ತಿಂಗಳನ್ನು ಆಯ್ಕೆ ಮಾಡಿ. ನಂತರ Enter RC Number/RC No. ಎಂಬಲ್ಲಿ ನಿಮ್ಮ ರೇಷನ್‌ ಕಾರ್ಡ್‌ ನಂಬರ್‌ ಎಂಟರ್‌ ಮಾಡಿ. GO ಬಟನ್‌ ಮೇಲೆ ಕ್ಲಿಕ್‌ ಮಾಡಿ.

  • Step-5: ಅಂತಿಮವಾಗಿ ನಿಮ್ಮ ರೇಷನ್‌ ಕಾರ್ಡ್‌ನಲ್ಲಿರುವ ಕುಟುಂಬದ ಮುಖ್ಯಸ್ಥರ ಹೆಸರು ಕಾಣುತ್ತದೆ, ಅವರ ಆಧಾರ ನಂಬರ್‌ನ ಕೊನೆಯ 4 ಸಂಖ್ಯೆ, ನಿಮ್ಮ ಕುಟುಂಬ ಸದಸ್ಯರ ಸಂಖ್ಯೆ, ಅಕ್ಕಿ ಸಿಗುವ ಪ್ರಮಾಣ ಮತ್ತು ನಿಮ್ಮ ಖಾತೆಗೆ ಜಮಾ ಆಗುವ ಹಣದ ವಿವರಗಳನ್ನು ಅಲ್ಲಿ ನೀಡಿರುತ್ತಾರೆ. ನೀವು Anna Bhagya DBT Status Check ಮಾಡಿಕೊಂಡು ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಲಿದೆ ಎಂಬುದನ್ನು ನೋಡಬಹುದು.

Anna Bhagya DBT Status Check Online 2024 Step-4

  • Step-6: ನಿಮ್ಮ ಪಡಿತರ ಚೀಟಿಯಲ್ಲಿರುವ ಮುಖ್ಯಸ್ಥರ ಆಧಾರಗೆ ಲಿಂಕ್‌ ಇರುವ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಿರುವ ಮಾಹಿತಿ ಈ ಕೇಳಗಿನಂತೆ ಲಭ್ಯವಾಗುತ್ತದೆ.
Anna Bhagya DBT Status Check Online 2024 Step-5
ಪ್ರಮುಖ ಲಿಂಕ್‌ಗಳು:
Anna Bhagya DBT Status Check Link:‌
 Check Online
ಅಧಿಕೃತ ವೆಬ್‌ಸೈಟ್: ahara.kar.nic.in, https://ahara.kar.nic.in/lpg/, ahara.kar.nic.in/status2/status_of_dbt.aspx

 

Leave a Comment

Your email address will not be published. Required fields are marked *

Scroll to Top